ಹೇಮರೆಡ್ಡಿ ಮಲ್ಲಮ್ಮ ಎಸ್.ಸೌಂದರ್ಯರಾಜನ್ ನಿರ್ದೆಶನದಲ್ಲಿ ಗುಬ್ಬಿ ವೀರಣ್ಣ ನಿರ್ಮಿಸಿ ೧೯೪೫ ಯಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. == ಕಥಾ ಸಾರಾಂಶ == ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ದೈವ ಭಕ್ತೆ. ಮೂಢನಾದ ಗಂಡನ ಸೇವೆಯನ್ನು ಮಾಡುತ್ತಾ ಅತ್ತೆ ನೀಡಿದ ಕಷ್ಟ-ಕಾರ್ಪಣ್ಯಗಳನ್ನು ಸಹಿಸುತ್ತಾ, ಶಿವನ ಆರಾಧನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾಳೆ.ಶಿವನ ಕರುಣೆಯಿಂದ ಮಲ್ಲಮ್ಮನಿಗೆ ಒಳಿತಾಗುತ್ತದೆ. ಗಂಡ ಜ್ಞಾನಿಯಾಗುತ್ತಾನೆ. ಅತ್ತೆಗೆ ಸದ್ಬುದ್ದಿ ಬರುತ್ತದೆ ಎಂಬ ಜಾನಪದ ಕತೆಯ ಸಾರವನ್ನೇ ಈ ಚಿತ್ರಕತೆಯು ಹೊಂದಿದೆ.‌ == ವಿಶೇಷತೆ == ಕು.ರಾ. ಸೀತಾರಾಮ ಶಾಸ್ತ್ರಿ ಈ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಡಿ.ಶಂಕರ್ ಸಿಂಗ್ ಮತ್ತು ವಿಠಲಾಚಾರ್ಯರು ಈ ಚಿತ್ರವನ್ನು ಬಾಡಿಗೆ ಆಧಾರದಲ್ಲಿ ಪಡೆದು ಅಪಾರ ಲಾಭವನ್ನು ಗಳಿಸಿದರು. == ಪಾತ್ರ ವರ್ಗ == ಬಿ.ಜಯಮ್ಮ - ಮಲ್ಲಮ್ಮ ಹೊನ್ನಪ್ಪ ಭಾಗವತರ್ ಗುಬ್ಬಿ ವೀರಣ್ಣ - ಹೇಮರೆಡ್ಡಿ ಸಿ.ಬಿ.ಮಲ್ಲಪ್ಪ ಕೆ.ಆರ್. ಸೀತಾರಾಮ ಶಾಸ್ತ್ರಿ == ಹಾಡುಗಳು == == ಹೊರಗಿನ ಕೊಂಡಿಗಳು == ಹೇಮರೆಡ್ಡಿ ಮಲ್ಲಮ್ಮ @ ಐ ಎಮ್ ಡಿ ಬಿ == ಉಲ್ಲೇಖ ==